ಮುಳಬಾಗಿಲು: ಇಂದು ಸೇನೆಗೆ ತೆರಳಬೇಕಿದ್ದ ಯೋಧ ಆಚಂಪಲ್ಲಿಯಲ್ಲಿ ಹೃದಯಾಘಾತದಿಂದ ಸಾವು
Mulbagal, Kolar | Sep 15, 2025 ಇಂದು ಸೇನೆಗೆ ತೆರಳಬೇಕಿದ್ದ ಯೋಧ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲುಕಿನ ಆಚಂಪಲ್ಲಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.ಮುನಿನಾರಾಯಣ (36) ಯೋಧ,ಆ.18 ರಿಂದ, ಸೆಪ್ಟೆಂಬರ್ 18 ವರೆಗೂ ರಜೆಯ ಮೇಲೆ ಬಂದಿದ್ದು, ಬರ್ಮಾ ಗಡಿಯಲ್ಲಿ ಕೆಲಸಕ್ಕೆ ನಿಯೋಜನೆ ಆಗಿದ್ದರು,ಸೆಪ್ಟೆಂಬರ್ 18 ಕ್ಕೆ ಕರ್ತವ್ಯಕ್ಕೆ ವಾಪಾಸ್ ಆಗಲು, ಹೊರಡಬೇಕಿದ್ದ ಮುನಿನಾರಾಯಣ ಮನೆಯಲ್ಲಿ ನಿದ್ರಾಸ್ತಿತಿಯಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಕಳೆದ 17 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ,ಮುನಿನಾರಾಯಣ,ಪತ್ನಿ, ಇಬ್ಬರು ಮಕ್ಕಳು, ತಾಯಿಯನ್ನ ಅಗಲಿದ್ದಾರೆ. ಯೋಧ ಮುನಿನಾರಾಯಣ ನಿಧನಕ್ಕೆ ಸ್ನೇಹಿತರು ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.