ತಿರುಮಕೂಡಲು ನರಸೀಪುರ: ತಿ. ನರಸೀಪುರ: ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಕಳ್ಳತನ - ಕೃತ್ಯ ಸಿಸಿಟಿವಿಯಲ್ಲಿ ಸೆರೆ
ತಿ. ನರಸೀಪುರ: ಪಟ್ಟಣದ ಪ್ರಸಿದ್ಧ ಶ್ರೀ ಗುಂಜನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಿ ಅಮ್ಮನವರ ಗುಡಿಯಲ್ಲಿ ಕಳ್ಳತನ ಸಂಭವಿಸಿದೆ. ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ಕದ್ದು ಪರಾರಿಯಾಗಿದ್ದಾರೆ. ದೇವಾಲಯದ ಮೂಲಗಳ ಪ್ರಕಾರ, ಕಳ್ಳರು ಶ್ರೀ ಗುಂಜನರಸಿಂಹ ಸ್ವಾಮಿ ದೇವಾಲಯದ ಮೇಲಿಂದ ಇಳಿದು, ನಂತರ ಶ್ರೀ ಮಹಾಲಕ್ಷ್ಮಿ ದೇವಾಲಯದ ಗೇಟ್ ಬೀಗವನ್ನು ಮುರಿದು ಒಳ ನುಗ್ಗಿದ್ದಾರೆ. ದೇವಾಲಯದ ಒಳಗೆ ಪ್ರವೇಶಿಸಿದ ಕಳ್ಳರು, ಮಹಾಲಕ್ಷ್ಮಿ ಗುಡಿಯಲ್ಲಿನ ಹುಂಡಿಯನ್ನು ಒಡೆದು ಅದರಲ್ಲಿ ಸಂಗ್ರಹವಾಗಿದ್ದ ನಗದು ಹಣವನ್ನು ಕದ್ದೊಯ್ದಿದ್ದಾರೆ. ಆದರೆ, ಹುಂಡಿಯಲ್ಲಿದ್ದ ಚಿಲ್ಲರೆ ಕಾಸುಗಳನ್ನು ಮಾತ್ರ ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಕಳ್ಳತನದ ಈ ಸಂಪೂರ್ಣ ಕೃತ್ಯವು ದೇವಾಲಯದ ಆವರಣದಲ್ಲಿ