ಚಾಮರಾಜನಗರ: ಹಳೇಪುರ ಸಮೀಪ ರಸ್ತೆಬದಿಯೇ ಜೋಡಿ ಚಿರತೆ ಪ್ರತ್ಯಕ್ಷ- ವೀಡಿಯೋ ಸೆರೆ
ರಸ್ತೆಬದಿಯೇ ಜೋಡಿ ಚಿರತಗಳು ಪ್ರತ್ಯಕ್ಷಗೊಂಡು ಕಾರಿನಲ್ಲಿದ್ದವರು ದಿಗಿಲುಗೊಂಡ ಘಟನೆ ಚಾಮರಾಜನಗರ ತಾಲೂಕಿನ ಹಳೇಪುರ ಸಮೀಪ ಭಾನುವಾರ ತಡರಾತ್ರಿ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ಸ್ಥಳೀಯರಿಗೆ ಮೊದಲು ಒಂದು ಚಿರತೆ ಎದುರಾಗಿದೆ. ಬಳಿಕ, ಸಮೀಪದಲ್ಲೇ ಮತ್ತೊಂದು ಚಿರತೆ ನಿಂತಿದ್ದನ್ನು ಕಂಡು ವಾಹನ ಸವಾರರಿಗೆ ಢವಢವ ಎಂದಿದೆ. ಚಾಮರಾಜನಗರ ತಾಲೂಕಿನ ಹಳೇಪುರದ ರಸ್ತೆಬದಿಯಲ್ಲೇ ಚಿರತೆ ಪ್ರತ್ಯಕ್ಷವಾಗಿದ್ದು ಸದ್ಯ ರೈತರ ಮನವಿ ಮೇರೆಗೆ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಇಟ್ಟಿದೆ.