ಹೈಜಿನ್ ಆನ್ ಗೋ ವಾಹನಗಳಿಗೆ ಗೃಹಸಚಿವ ಜಿ. ಪರಮೇಶ್ವರ್ ಅವರು ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಿಜಿಐಜಿಪಿ ಎಂ.ಎ ಸಲೀಂ ಅವರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಂಚಾರಿ ಪೊಲೀಸರಿಗೆ ಕರ್ತವ್ಯ ನಿರ್ವಹಣೆ ವೇಳೆ ಅನುಕೂಲ ಆಗುವಂತೆ ಹೈಜಿನ್ ವಾಹನ ಬಳಕೆ ಮಾಡಲಾಗುತ್ತಿದ್ದು, ರೆನಾಲ್ಟೋ ನಿಸಾನ್ ಖಾಸಗಿ ಸಂಸ್ಥೆಯಿಂದ ಮೂರು ವಾಹನ ಕೊಡುಗೆಯಾಗಿ ನೀಡಲಾಗಿದ್ದು, ಪ್ರಾಯೋಗಿಕವಾಗಿ ಮೂರು ವಾಹನಗಳು ಇಲಾಖೆಗೆ ನೀಡಲಾಗಿದೆ.