ದಾಂಡೇಲಿ : ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯ 109ನೇ ಕೃತಿಯಾದ ರವೀಂದ್ರ ಲಕ್ಷ್ಮೇಶ್ವರರ "ಶ್ರೀ ಶಂಕರಾರ್ಯಬಂದ ಕಾವ್ಯಂ" ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ನಗರದ ಶ್ರೀ ಶಂಕರ ಮಠದಲ್ಲಿ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಜರುಗಿತು. ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಧಾರವಾಡದ ಶ್ರೀ ಕ್ಷೇತ್ರ ದ್ವಾರಾಪುರ ಮಠದ ಪೂಜ್ಯ ಸ್ವಾಮೀಜಿಯವರಾದ ಪೂಜ್ಯ ಡಾ.ಪರಮಾತ್ಮಾ ಗುರೂಜೀಯವರು ನಮ್ಮ ವ್ಯಕ್ತಿತ್ವ ಆಚಾರ ವಿಚಾರ ಬದುಕು ಬರಹಕ್ಕೆ ಎಂದು ವಯಸ್ಸು ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ಸೂಕ್ತ ಉದಾಹರಣೆ ಕೊಡುವುದಾದರೆ ರವೀಂದ್ರ ಲಕ್ಷ್ಮೇಶ್ವರ ಅವರನ್ನು ಕೊಡಬಹುದು ಎಂದರು.