ರಾಯಚೂರು: ಕೆ ಇರಬಗೇರಾ ಗ್ರಾಮದಲ್ಲಿ ಮೂರು ಜನ ಅಕ್ಕತಂಗಿಯರು ಆತ್ಮಹತ್ಯೆಗೆ ಯತ್ನ, ಘಟನೆ ಕುರಿತು ನಗರದಲ್ಲಿ ಎಸ್ಪಿ ಪುಟ್ಟಮಾದಯ್ಯ ಹೇಳಿಕೆ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೆ ಇರಬಗೇರಾ ಗ್ರಾಮದಲ್ಲಿ ಭಾನುವಾರ ಮೂರು ಜನ ಅಕ್ಕತಂಗಿಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ತಿಸಿರುವ ಘಟನೆ ನಡೆದಿದ್ದು ಅದರಲ್ಲಿ ಒಬ್ಬ ಯುವತಿ ಮೃತಪಟ್ಟು ಇನ್ನುಳಿದ ಇಬ್ಬರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು, ಘಟನೆಯ ಕುರಿತು ಸೋಮವಾರ ಮಧ್ಯಾನ ರಾಯಚೂರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಸ್ಪಿ ಎಂ ಪುಟ್ಟ ಮಾದಯ್ಯ ಅವರು ವಿವರಣೆ ನೀಡಿದ್ದಾರೆ. ಅಲ್ಲದೆ ಕುಟುಂಬಸ್ಥರು ಏನಾದರೂ ದೂರು ನೀಡಿದ್ದರೆ ಅದರ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಕೂಡ ತಿಳಿಸಿದರು.