ಚಾಮರಾಜನಗರ: ನಗರದಲ್ಲಿ ಜಾತಿ ಕಾಲಂ ನಲ್ಲಿ ಉಪ್ಪಾರ ಅಂತಾ ಬರೆಯಲು ಕರೆಕೊಟ್ಟ ಮಾಜಿ ಸಚಿವ ಹಾಗೂ ಶಾಸಕ ಪುಟ್ಟರಂಗಶೆಟ್ಟಿ
ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಜಾತಿಗಣತಿ ಸಮೀಕ್ಷೆಯಲ್ಲಿ ಉಪ್ಪಾರ ಸಮುದಾಯದವರು ಜಾತಿ ಕಾಲಂನಲ್ಲಿ ಉಪ್ಪಾರ ಎಂದು ಬರೆಯಸುವಂತೆ ತಿಳಿಸಿದರು. ಇಂದಿನಿಂದ ಅ.9 ವರೆಗೆ 15 ದಿನಗಳ ಕಾಲ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ. 9 ನೇ ರವರೆಗೆ 15 ದಿನಗಳ ಕಾಲ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ. 9 ನೇ ಕಾಲಂನಲ್ಲಿ ಹಿಂದು ಎಂದು ಬರೆಯಿಸುವಂತೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.