ದಾಂಡೇಲಿ : ನಗರದ ಸುಸ್ವರ ಸಂಗೀತ ಸಂಸ್ಥೆಯ ವಾರ್ಷಿಕೋತ್ಸವದ ನಿಮಿತ್ತ ಶ್ರೀ ವೀರಭದ್ರೇಶ್ವರ ಸಭಾಭವನದಲ್ಲಿ ಸುಸ್ವರ ಸಂಭ್ರಮ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ಭಾನುವಾರ ಸಂಜೆ 7:00 ಸುಮಾರಿಗೆ ಜರುಗಿತು. ಕಾರ್ಯಕ್ರಮವನ್ನು ಗೋಕರ್ಣದ ಸ್ವರಾತ್ಮಕ ಗುರುಕುಲ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಅಶೋಕೆ ಇಲ್ಲಿಯ ಪ್ರಾಚಾರ್ಯರ ಡಾ. ಹರೀಶ್ ಹೆಗಡೆಯವರು ಉದ್ಘಾಟಿಸಿ ಮಾತನಾಡುತ್ತಾ, ಸುಸ್ವರ ಸಂಗೀತ ವಿದ್ಯಾಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಗಾಯನವನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಬದ್ಧತೆಯಿಂದ ಕಲಿಸಿಕೊಡುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ. ಶಶಿಕಲಾ ಚಂದ್ರಕಾಂತ್ ಭಟ್ಟ ಗೋಪಿಯವರ ಕಲಾ ಸೇವೆ ಸದಾ ಅಭಿನಂದನೀಯ ಮತ್ತು ಅನುಕರಣೀಯವಾಗಿದೆ ಎಂದರು.