ಪಾಂಡವಪುರ: ನ್ಯಾಮನಹಳ್ಳಿ ಸಮೀಪ ಹೇಮಾವತಿ ನಾಲೆಗೆ ಕೌಟುಂಬಿಕ ಕಲಹದಿಂದ ಬಿದ್ದು ಪತಿ ಆತ್ಮಹತ್ಯೆ
ಪಾಂಡವಪುರ: ಕೌಟುಂಬಿಕ ಕಲಹ ನಾಲೆಗೆ ಬಿದ್ದು ಪತಿ ಆತ್ಮಹತ್ಯೆ ತಾಲೂಕಿನ ನ್ಯಾಮನಹಳ್ಳಿ ಸಮೀಪ ಹೇಮಾವತಿ ನಾಲೆಗೆ ಬಿದ್ದು 33 ವರ್ಷದ ಹೇಮಂತ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿಯೊಂದಿಗೆ ನಿರಂತರ ಕಲಹದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದಾನೆ. ಪತ್ನಿ ಜೊತೆ ಪ್ರತ್ಯೇಕವಾಗಿ ವಾಸವಿದ್ದರೂ ಜಗಳ ಮುಂದುವರಿದಿತ್ತು. ಕುಟುಂಬದವರು ಬುದ್ದಿ ಹೇಳಿದರೂ ಪ್ರಯೋಜನವಾಗದೆ, ಜಿಗುಪ್ಪೆಗೊಂಡು ಹೇಮಂತ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.