ಬೇಲೂರು: ಹಗರೆ ಬಳಿ ಟಿಪ್ಪರ್-ಆಟೋ-ಕಾರು ನಡುವೆ ಭೀಕರ ಅಪಘಾತ: 8 ಮಂದಿಗೆ ಗಾಯ, ಮೂವರು ಗಂಭೀರ
Belur, Hassan | Sep 26, 2025 ಹಗರೆ ಬಳಿ ಟಿಪ್ಪರ್-ಆಟೋ-ಕಾರು ನಡುವೆ ಭೀಕರ ಅಪಘಾತ: 8 ಮಂದಿಗೆ ಗಾಯ, ಮೂವರು ಗಂಭೀರ ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ಹಗರೆ ಸಮೀಪ ಇಂದು ಬೆಳಿಗ್ಗೆ ನಡೆದ ಸರಣಿ ಅಪಘಾತದಲ್ಲಿ ಒಟ್ಟು ಎಂಟು ಮಂದಿ ಗಾಯಗೊಂಡಿದ್ದು, ಚಿಂತಾಜನಕವಾಗಿದೆ. ಮೂವರ ಸ್ಥಿತಿ ಮಾಹಿತಿಯಂತೆ, ತುಮಕೂರು ಮೂಲದ ಮೂವರು ಪ್ರಯಾಣಿಸುತ್ತಿದ್ದ ಕಾರು ಹಾಸನ ಮೂಲದ ನಾಲ್ವರು ಪ್ರಯಾಣಿಸುತ್ತಿದ್ದ ಆಟೋವನ್ನು ಓವರ್ಟೇಕ್ ಮಾಡುವ ವೇಳೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯೊಂದಿಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.ಗಾಯಾಳುಗಳಿಗೆ ಬೇಲೂರು ಸರ್ಕಾರಿ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನದ ಹಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿ