ರಾಯಚೂರು: ಕಲ್ಲೂರ ಗ್ರಾಮದಲ್ಲಿ ಸೇತುವೆ ಕಾಮಗಾರಿ ಸ್ಥಳದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ರಸ್ತೆ ಕೊಚ್ಚಿಕೊಂಡು ಹೋಗಿ ಸಾರ್ವಜನಿಕರ ಪರದಾಟ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲ್ಲೂರ ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದು ತಾತ್ಕಾಲಿಕವಾಗಿ ನಿರ್ಮಿಸಿರುವ ರಸ್ತೆ ಮಳೆಯಿಂದ ಕೊಚ್ಚಿಕೊಂಡು ಹೋಗಿದ್ದು ಸಾರ್ವಜನಿಕರು ಪರದಾಡುವ ಉಂಟಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸೋಮವಾರ ಮಧ್ಯಾನ ಸಾರ್ವಜನಿಕರು ರಸ್ತೆ ದಾಟಲಾಗಿದೆ ತುಂಬಾ ಹೈರಾಣ ಆಗಿದ್ದಾರೆ. ಎರಡು ಕಡೆಗಳಲ್ಲೂ ಕಿಲೋಮೀಟರ್ ಗಟ್ಟಲೆ ವಾಹನಗಳ ಸಾಲು ಕಂಡುಬರುತ್ತಿದ್ದು ಬೈಕ್ ಸವಾರರು ಜೀವ ಭಯದಲ್ಲಿಯೇ ನೀರಿನಲ್ಲಿ ಬೈಕ್ ತಳ್ಳಿಕೊಂಡು ಹೋಗುತ್ತಿರುವ ದೃಶ್ಯವೂ ಕೂಡ ಕಂಡು ಬಂದಿದೆ.