ಮೂಡಿಗೆರೆ: ವಾಹನ ಸಮೇತ ಸಾಗುವಾನಿ ಮರ ಸೀಜ್.! ಮೂವರ ಬಂಧನ, ಪ್ರಕರಣ ದಾಖಲು.!
ಸಾಗುವಾನಿ ತುಂಡುಗಳನ್ನು ಸಾಗಿಸುತ್ತಿದ್ದ ವಾಹನ ವಶಪಡಿಸಿಕೊಂಡ ಅರಣ್ಯ ಸಿಬ್ಬಂದಿ ಐವರನ್ನು ಬಂಧಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪ್ರಾದೇಶಿಕ ಅರಣ್ಯ ವಲಯದ ಭಾರತಿಬೈಲು ಶಾಖೆ ವ್ಯಾಪ್ತಿಯ ಉಪ ವಲಯ ಅರಣ್ಯಾಧಿಕಾರಿ ಸುಹಾಸ್ ನೇತೃತ್ವದ ತಂಡ ಮಾರುತಿ ಓಮ್ನಿ (KA-05-P-8904) ಸಾಗುವಾನಿ ತುಂಬಿದ್ದ ವಾಹನವನ್ನು ಬೆನ್ನಟ್ಟಿ ಹಿಡಿದಿದೆ. ವಾಹನ ಹಾಗೂ 05 ಸಾಗುವಾನಿ ತುಂಡುಗಳನ್ನು ಜಪ್ತಿ ಮಾಡಿ, ವಶಕ್ಕೆ ಪಡೆದಿದ್ದು,3 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ,ಭಾರತಿಬೈಲು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸುಹಾಸ್ ತಂಡಕ್ಕೆ ,ಉತ್ತೇಜನಕಾರಿ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.