ಗದಗ: ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ, ಪಾಕ್ ಮುಖಾಮುಖಿ, ನಗರದಲ್ಲಿ ಅಭಿಮಾನಿಗಳಿಂದ ಶುಭ ಹಾರೈಕೆ
Gadag, Gadag | Sep 28, 2025 ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ-ಪಾಕ್ 41 ವರ್ಷದ ಬಳಿಕ ಮುಖಾಮುಖಿ ಆಗಲಿವೆ. ಈ ಹಿನ್ನಲೆಯಲ್ಲಿ ಗದಗದಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಭಾರತ ತಂಡಕ್ಕೆ ಶುಭ ಹಾರೈಸಲಾಗಿದೆ. ಎರಡು ಲೀಗ್ ಪಂದ್ಯದಲ್ಲಿ ಪಾಕ್ ವಿರುದ್ದ ಭಾರತ ಈಗಾಗಲೇ ಜಯಭೇರಿ ಭಾರಿಸಿದೆ. ಭಾರತ ಫೈನಲ್ ನಲ್ಲಿ ಗೆದ್ದೆ ಗೆಲ್ಲುತ್ತೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಟೀಂ ಇಂಡಿಯಾ ಫುಲ್ ಸ್ಟ್ರಾಂಗ್ ಇದೆ ಅಂತ ಅಭಿಮಾನಿಗಳು ಹೇಳ್ತಿದ್ದಾರೆ.