ಶಿರಸಿ: ಎಮ್.ಎಮ್. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶ್ವ ಸಂಗೀತ ದಿನ ಆಚರಣೆ
ಶಿರಸಿ : ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ಸಂಗೀತ ಕಲಿಸಿ ಮತ್ತು ಸಂಸ್ಕೃತಿ ಉಳಿಸಿ ಅಭಿಯಾನ ಮತ್ತು ಡಾ.ಕೃಷ್ಣ ಮೂರ್ತಿ ಭಟ್ಟ ಬೊಮ್ಮನಹಳ್ಳಿ ಅವರ ಸಂಗೀತ ಕಲಾಕುಸುಮ ಪುಸ್ತಕ ಬಿಡುಗಡೆ ಕಾರ್ಯಕ್ರಮ ಗುರವಾರ ನಡೆಯಿತು. ನಗರದ ಎಮ್.ಎಮ್.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೋಟಿನ್ಸರ ಸಭಾಭವನದಲ್ಲಿ ಮಹಾವಿದ್ಯಾಲಯದ ಸಂಗಿತ ಮತ್ತು ನೃತ್ಯವಿಭಾಗ ಮತ್ತು ಕನ್ನಡ ವಿಶ್ವವಿದ್ಯಾಲಯ ಹಂಪಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಹಂಪಿ ವಿಶ್ವ ವಿದ್ಯಾಲಯದ ಕುಲಪತಿ ಡಾ. ಡಿ.ವಿ ಪರಶಿವಮೂರ್ತಿ ಉದ್ಘಾಟಿಸಿದರು. .