ದೊಡ್ಡಬಳ್ಳಾಪುರ ತಾಲೂಕಿನ ರೈತ ಚೇತನ ಡಾ. ವೆಂಕಟ್ ರೆಡ್ಡಿ ಅವರ 14ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಭಾನುವಾರ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳಗೊಂಡ ಹೋಬಳಿಯ ರಾಮೇಶ್ವರ ಗೇಟ್ಪಾಳ್ಯ ಚಿಕ್ಕ ಹೆಜ್ಜೆ ರಸ್ತೆಯಲ್ಲಿರುವ ತಬರನ ತೋಟದಲ್ಲಿ 12:00 ಸುಮಾರಿನಲ್ಲಿ ನಡೆಯಿತು ತಳ ಸಮುದಾಯಗಳ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಧೀಮಂತ ನಾಯಕರಾದ ವೆಂಕಟರೆಡ್ಡಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಹಲವಾರು ಕನ್ನಡಪರ ಹೋರಾಟಗಾರರು ಗಣ್ಯರು ಭಾಗವಹಿಸಿದ್ದರು