ಶಿವಮೊಗ್ಗ: ನವ್ಯಶ್ರೀ ಅನ್ನದಾನಂ ನೂರರ ಸಂಭ್ರಮ: ನಗರದಲ್ಲಿ ಟ್ರಸ್ಟಿ ನವ್ಯಶ್ರೀ ನಾಗೇಶ್
ನವ್ಯಶ್ರೀ ಈಶ್ವರನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ನವ್ಯಶ್ರೀ ಅನ್ನದಾನಂ ಸೇವಾ ಕಾರ್ಯವು 100ರ ಗಡಿ ತಲುಪಿರುವ ಹಿನ್ನೆಲೆ ನವೆಂಬರ್ 4ರ ಮಧ್ಯಾಹ್ನ 12:30 ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಚೌಡೇಶ್ವರಿ ದೇವಸ್ಥಾನದ ಸಮೀಪ ನವ್ಯಶ್ರೀ ಅನ್ನದಾನಂ ನೂರರ ಸಂಭ್ರಮ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ನವ್ಯಶ್ರೀ ನಾಗರಾಜ್ ತಿಳಿಸಿದರು.