ಕಲಬುರಗಿ : ಡಿಸೆಂಬರ್ 25 ರಂದು ಕಲಬುರಗಿ ನಗರದ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮನುಸ್ಮೃತಿ ದಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಎಸ್ಎಸ್ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಹೇಳಿದ್ದಾರೆ.. ಡಿ18 ರಂದು ಮಧ್ಯಾನ 12 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 12.30 ಕ್ಕೆ ಪಟೇಲ್ ವೃತ್ತದಲ್ಲಿ ಮನುಸ್ಮೃತಿ ದಹನ ಮಾಡಲಾಗುತ್ತದೆ.. ಈ ವೇಳೆ ಬುದ್ದಿಜೀವಿಗಳು, ವಿಚಾರವಾದಿಗಳು, ಚಿಂತಕರು ಉಪಸ್ಥಿತರಿರಲಿದ್ದಾರೆಂದು ಅರ್ಜುನ್ ಭದ್ರೆ ಹೇಳಿದ್ದಾರೆ