ತೀರ್ಥಹಳ್ಳಿ: ಚರ್ಚ್ ಬಳಿ ಕಾಡಾನೆ ಪ್ರತ್ಯಕ್ಷ:ಆಗುಂಬೆ ಪೊಲೀಸರಿಂದ ಪ್ರಕಟಣೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಚರ್ಚ್ ಬಳಿ ಕಾಡಾನೆ ರಾತ್ರಿ ವೇಳೆ ಪ್ರತ್ಯಕ್ಷವಾಗಿದೆ. ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದವರಿಗೆ ಕಾಡಾನೆ ಎದುರಾಗಿದ್ದು, ವಾಹನ ಸವಾರರು ಕಾಡಾನೆಯ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆಗುಂಬೆ ಪೊಲೀಸರು ಮೈಕ್ ಹಿಡಿದು ಆಗುಂಬೆ ನಗರದಲ್ಲಿ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಆಗುಂಬೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದ್ದು, ಆಗುಂಬೆಯ ಸಾರ್ವಜನಿಕರು ಹಾಗೂ ವಾಹನ ಸವಾರರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ತಿಳಿಸಿರುತ್ತಾರೆ. ಈ ಕುರಿತಾದ ಮಾಹಿತಿ ಸೋಮವಾರ ಲಭ್ಯವಾಗಿದೆ.