ದಾಂಡೇಲಿ ನಗರಸಭೆಯ ಸದಸ್ಯರಾದ ಮೌಲಾಲಿ ಮುಲ್ಲಾ ಅವರ ಮೌಳಂಗಿಯಲ್ಲಿರುವ ತಮ್ಮ ಕೃಷಿ ಜಮೀನಿನಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷವಾಗಿತ್ತು. ತಕ್ಷಣವೇ ಈ ಬಗ್ಗೆ ಸ್ಥಳೀಯರು ಮೌಲಾಲಿ ಮುಲ್ಲಾ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮೌಲಾಲಿ ಮುಲ್ಲಾ ಅವರು ಅದು ಒಂದು ಜೀವವಾಗಿದ್ದು, ಅದು ಕೂಡಾ ಸ್ವತಂತ್ರವಾಗಿ ನೆಮ್ಮದಿಯಿಂದ, ಸಂತೃಪ್ತಿಯಿಂದ ಇರಬೇಕೆಂದು ಹಂಬಲಿಸಿರುವ ಸಂದರ್ಭದಲ್ಲಿ ನಾವು ಅದನ್ನು ಹಿಡಿದು ಸ್ಥಳಾಂತರಗೊಳಿಸುವುದು ಸರಿಯಾದ ಕ್ರಮವಲ್ಲ. ಹಾಗಾಗಿ ಅದನ್ನು ಅದರ ಪಾಡಿಗೆ ಬಿಟ್ಟುಬಿಡೋಣ, ನಾವು ನಮ್ಮಷ್ಟಕ್ಕೆ ಇರೋಣ ಎಂದು ನಿಜವಾದ ವನ್ಯಕಾಳಜಿಯನ್ನು ಮೆರೆದರು. ಇದಾದ ಸ್ವಲ್ಪ ಹೊತ್ತಿನಲ್ಲಿಯೇ ಹೆಬ್ಬಾವು ಹತ್ತಿರದಲ್ಲಿರುವ ಕಾಡನ್ನು ಸೇರಿಕೊಂಡಿತು.