ರಾಯಚೂರು: ಬಸವಸಾಗರ ವೃತ್ತದ ಬಳಿಯ ಕಟ್ಟಡ ಮೇಲಿಂದ ಜಿಗಿಯಲು ಯತ್ನಿಸಿದ ಯುವಕ; ಮುಂದೆನಾಯ್ತು ವಿಡಿಯೋ ನೋಡಿ
ತಾಲೂಕಿನ ಬಸವಸಾಗರ ವೃತ್ತ ಬಳಿಯ ಖಾಸಗಿ ಆಸ್ಪತ್ರೆ ಕಟ್ಟಡದ ಮೇಲಿಂದ ಜಿಗಿಯಲು ಯತ್ನಿಸಿದ್ದಾನೆ. ಯುವಕನನ್ನು ಮುದಗಲ್ ಪಟ್ಟಣದ ಜಾವೀದ್ ಪಾಷಾ ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನದ ಹಿಂದೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಬಂದಿದ್ದ ಎನ್ನಲಾಗಿದೆ. ಸೆ.15 ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಏಕಾಏಕಿ ಆಸ್ಪತ್ರೆಯ ಎರಡು ಅಂತಸ್ತಿನ ಕಟ್ಟಡದ ಮೇಲೆ ಏರಿ ಕಟ್ಟಡದ ತುದಿಗೆ ನಿಂತು ಕೆಳಗೆ ಜಿಗಿದು ಸಾಯುವುದಾಗಿ ಜೋರಾಗಿ ಕೂಗಾಡಿದ್ದಾನೆ. ಕೆಲಕಾಲ ಹೈಡ್ರಾಮ ಮಾಡಿದ್ದು ಆಸ್ಪತ್ರೆ ಸಿಬ್ಬಂದಿಗಳು ಗಾಬರಿಗೊಂಡು ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಯುವಕ ಕುಡಿದ ಮತ್ತಿನಲ್ಲಿ ಹೈಡ್ರಾಮ ಮಾಡಿದ್ದಾನೆ ಎನ್ನಲಾಗಿದ್ದು ಆತ್ಮಹತ್ಯೆಗೆ ಯಾಕೆ ಮುಂದಾಗಿದ್ದ ಎಂದು ತಿಳಿದುಬಂದಿಲ್ಲ. ಯುವಕನ ವಿ