ರಾಯಚೂರು: ಜಿಲ್ಲೆಯ ಬೋರ್ಡ್ ಇರದ ಬಸ್ಸಿನಲ್ಲಿ ಪ್ರಯಾಣಿಕರು ಬಸ್ ಕಂಡಕ್ಟರ್ ನಡುವೆ ಮಾತಿನ ಚಕಮಕಿ; ಯಾಕೆ ಗೊತ್ತಾ
ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸಿಗೆ ಬೋರ್ಡ್ ಹಾಕದ ಕಾರಣ ಎಲ್ಲಿಗೆ ಹೋಗುತ್ತದೆಂಬ ಕುರಿತು ಕಂಡಕ್ಟರ್ ಸರಿಯಾಗಿ ಮಾಹಿತಿ ನೀಡಿಲ್ಲವೆಂದು ಪ್ರಯಾಣಿಕರು ಸಾರಿಗೆ ಬಸ್ ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೆ.30 ರ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಡೆದಿದೆ. ಸಿಂಧನೂರಿನಿಂದ ರಾಯಚೂರಿಗೆ ಹೊರಟಿದ್ದ ಸಾರಿಗೆ ಬೋರ್ಡ್ ಇರಲಿಲ್ಲ. ಆ ವೇಳೆ ಸಿಂಧನೂರಿನಲ್ಲಿ ಹತ್ತಿದ ಪ್ರಯಾಣಿಕರು ರಾಯಚೂರಿಗೆ ಹೋಗುತ್ತದೆ ಎಂದು ಹೇಳಿದ ಕಂಡಕ್ಟರ್ ಮಾತು ಕೇಳಿ ಹತ್ತಿದ್ದಾರೆ. ಆದರೆ ನಡುವೆ ಎಲ್ಲೆಲ್ಲಿ ಸ್ಟಾಪ್ ಇದೆಯೋ ಇಲ್ಲವೋ ಎಂಬ ಮಾಹಿತಿ ಸರಿಯಾಗಿ ನೀಡಿಲ್ಲವೆಂದು ಪ್ರಯಾಣಿಕರು ಮತ್ತು ಕಂಡಕ್ಟರ್ ನಡುವೆ ಬಸ್ಸಿನೊಳಗೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಮಾನ್ವಿಗೆ ಬಂದ ನಂತರ ಇದ್ದ ಬದ್ದ ಯಾವುದೋ ಒಂದು ಬೋರ್ಟ್ ಹಾಕಿಕೊಂಡು ಬಸ್ ರಾ