ಮುಳಬಾಗಿಲು: ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಚಿನ್ನದ ಪತಕ ಪಡೆದ ಬಾಲಕ ಸಮರ್ಥ್ ಪಟ್ಟಣದಲ್ಲಿ ಶಾಸಕ ಸಮೃದ್ಧಿ ಮಂಜುನಾಥರಿಂದ ಸನ್ಮಾನ
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಚಿನ್ನದ ಪತಕ ಪಡೆದ ಬಾಲಕ ಸಮರ್ಥ್ ಮುಳಬಾಗಿಲು : ಅತಿ ಚಿಕ್ಕ ವಯಸ್ಸಿನಲ್ಲೇ ಕರಾಟೆ ಕ್ರೀಡೆಯಲ್ಲಿ ರಾಜ್ಯ ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಅದ್ಭುತ ಸಾಧನೆ ಹಾಗೂ ತಮಿಳುನಾಡು ರಾಜ್ಯದ ಚೆನ್ನೈ ನಗರದ ಎಸ್ಎಸ್ವಿಟಿ ಕಾಲೇಜು ಆವರಣದಲ್ಲಿ ವರ್ಲ್ಡ್ ಕರಾಟೆ ಅಸೋಸಿಯೇಷನ್ ವತಿಯಿಂದ ನಡೆದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿ ಭಾಗವಹಿಸಿ ಚಿನ್ನದ ಪದಕ ಹಾಗೂ ಪ್ರಾಕೃತಿ ಪತ್ರ ಪಡೆದ ಸಮರ್ಥ್ ನಾಯಕ್ ಎಂಬ ಬಾಲಕನಿಗೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ರವರಿಂದ ಸನ್ಮಾನಿಸಲಾಯಿತು.