ಬಸವಕಲ್ಯಾಣ: ನ. 22ರಂದು ಮಹಮ್ಮದ್ ಪೈಗಂಬರ್ ರವರ 1500 ನೇ ಜನ್ಮದಿನೋತ್ಸವ ಆಯೋಜನೆ; ನಗರದಲ್ಲಿ ಎಂಎಲ್ಸಿ ಸಲೀಂ ಅಹ್ಮದ್ ಅವರಿಂದ ಸ್ಥಳ ಪರಿಶೀಲನೆ
ಬಸವಕಲ್ಯಾಣ ನಗರದಲ್ಲಿ ದಿನಾಂಕ 22/11/2025 ರಂದು ಜರಗಲಿರುವ *ಮಹಮ್ಮದ್ ಪೈಗಂಬರ್ ರವರ 1500 ನೇ ಜನ್ಮೋತ್ಸವ ಅಂಗವಾಗಿ ವಿಶ್ವ ಶಾಂತಿ ಸಂದೇಶ, ಸೂಫಿ ಸಂತರ ಸಮಾವೇಶ ಹಾಗೂ ಬಂದೇ ನವಾಜ್ ದರ್ಗಾ ಮುಖ್ಯಸ್ಥರು, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಹಾಫೀಜ್ ಸೈಯದ್ ಷಾ ಅಲಿ ಹುಸೇನಿ ರವರಿಗೆ ಸನ್ಮಾನ* ಕಾರ್ಯಕ್ರಮ ಪೂರ್ವ ಭಾವಿ ಸಭೆಯನ್ನು ಜರುಗಿತು. ಸದರಿ ಪೂರ್ವಭಾವಿ ಸಭೆಯ ಮುಖ್ಯ ಅತಿಥಿಗಳಾಗಿ ಸಲೀಂ ಅಹ್ಮದ ಮಾನ್ಯ ಸರ್ಕಾರಿ ಮುಖ್ಯ ಸಚೇತರು, ಕರ್ನಾಟಕ ವಿಧಾನಪರಿಷತ ರವರು ಭಾಗವಹಿಸಿದ್ದರು. ಹಾಗೂ ಹೈದರ್ ಪಾಶ್ಯಾ ಖಾದ್ರಿ ದರ್ಗಾ ಕಮಿಟಿ ಮುಖಂಡರು ನೀಲಂಗಾ, ಖಾಜಾ ಜಿಬೂಲ್ ಹಸನ್ ಜಾಗಿರ್ದಾರ ಅಧ್ಯಕ್ಷರು ರಾಜಾಬ್ಕಸವಾರ ದರ್ಗಾ ಬಸವಕಲ್ಯಾಣ, ಸೈಯದ್ ಉಮರ್ ಹಾಸ್ಮಿ ಬೀದರ್, ಕೆ.ಎಮ್. ಸೈಯದ್ ಕೊಪ್ಪಳ ಹಾಗೂ ಜಿಲ್ಲೆಯ ಅನೇಕ ದ