ಕಲಬುರಗಿ-ಚಿತ್ರದುರ್ಗ ಎ/ಸಿ ಸ್ಲೀಪರ್ ಬಸ್ ಕಾರ್ಯಾಚರಣೆ ಆರಂಬಿಸಿದ್ದಾಗಿ ಇಲಾಖೆ ಪ್ರಕಟಣೆ ನೀಡಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-1 ರಿಂದ ಕಲಬುರಗಿ-ಚಿತ್ರದುರ್ಗ ಹಾಗೂ ಕಲಬುರಗಿ-ಮೈಸೂರು ಎ/ಸಿ ಸ್ಲೀಪರ್ ಬಸ್ಗಳ ಕಾರ್ಯಾಚರಣೆ ಆರಂಭಿಸಲಾಗಿದೆ. ಕಲಬುರಗಿ-ಚಿತ್ರದುರ್ಗ ಬಸ್ ಪ್ರತಿದಿನ ರಾತ್ರಿ 10:45ಕ್ಕೆ ಕಲಬುರಗಿಯಿಂದ ಹೊರಟು ಜೇವರ್ಗಿ,ಶಹಾಪೂರ, ಲಿಂಗಸೂರು, ಸಿಂಧನೂರು,ಗಂಗಾವತಿ,ಹೊಸಪೇಟೆ ಮಾರ್ಗವಾಗಿ ಮುಂಜಾನೆ 8 ಗಂಟೆಗೆ ಚಿತ್ರದುರ್ಗ ತಲುಪಲಿದೆ