ಚಿತ್ರದುರ್ಗ: ಚಿತ್ರದುರ್ಗ ನವರಾತ್ರಿ ಹಿನ್ನೆಲೆ ನವದುರ್ಗೆಯರ ಝಲಕ್: ವಿಡಿಯೋ ವೈರಲ್
ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ ಥೇಟ್ ನವದುರ್ಗೆಯರೇ ಅರಳಿ ನಿಂತಿದ್ದಾರೆ.ಚಿತ್ರದುರ್ಗ ನಗರದ ಬುರುಜನಹಟ್ಟಿ ಮೆಕಪ್ ಕಲಾವಿಧೆ ಶೃತಿ ತನ್ನ ಗೆಳತಿಯರಿಗೆ ಮುಖಭಾವ ಓಲುವ ನವದುರ್ಗೆಯರ ವೇಷಭೂಷಣದ ಜೊತೆ ಕಲರ್ ಪುಲ್ ಮೇಕಪ್ ಮಾಡಿದ್ದು, ಇದೀಗ ನವದುರ್ಗೆಯರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನವರಾತ್ರಿ ಆಚರಣೆ ಜೊತೆ ದಿನಕ್ಕೋಬ್ಬರನ್ನ ರೆಡಿ ಮಾಡುವ ಮೂಲಕ ಶೃತಿ ತಮ್ಮ ಕಲಾಪ್ರತಿಭೆ ತೋರಿದ್ದಾರೆ. ಶೈಲಾಪುತ್ರಿ, ಬ್ರಹ್ಮಚಾರಿಣಿ, ಸ್ಕಂದಮಾತಾ, ಕಾಳರಾತ್ರಿ, ಮಹಾಗೌರಿ ಸೇರಿ 9 ಮಂದಿ ದೇವಿಯರ ವೇಷಭೂಷಣದ ಜೊತೆ ಗೆಳತಿಯರಿಗೆ ಆಕರ್ಷಣಿಯ ಮೆಕಪ್ ಮಾಡಿದ್ದಾರೆ.