ಜೋಯಿಡಾ : ಜೋಯಿಡಾ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ದೇವರಾಜ ಅರಸು ಸಭಾ ಭವನದಲ್ಲಿ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನದ ಕಾವ್ಯೋತ್ಸವ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯ್ತು. ಕಸಾಪ ಜಿಲ್ಲಾ ಸದಸ್ಯೆ ಸೀತಾ ದಾನಗೇರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಯುವ ವಯಸ್ಸು ಬಂಗಾರದ ವಯಸ್ಸು, ಶಿಸ್ತು, ಸಂಯಮ, ತಾಳ್ಮೆಯಿಂದ ಗುರಿಯತ್ತ ಸಾಧನೆ ಮಾಡಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದರು.