ತಾರಾನಾಥ ಶಿಕ್ಷಣ ಸಂಸ್ಥೆಯ ಬಂಕಟ್ ಲಾಲ್ ರಾಜಾರಾಮ್ ವಾಣಿಜ್ಯ ಮಹಾವಿದ್ಯಾಲಯ ಹಾಗೂ ರೋಟರಿ ಕ್ಲಬ್ ಸಂಯುಕ್ತಾಕ್ಷರದಲ್ಲಿ ಡಾ. ಸರ್ದಾರ್ ವಲ್ಲಾಭಾಯಿ ಪಟೇಲ್ ಅವರ 150ನೆಯ ಜನ್ಮದಿನೋತ್ಸವ ಆಚರಿಸಲಾಯಿತು. ಕಾರ್ಯಕ್ರಮವನ್ನು ದವಾಲ್ ಜೋಬನ ದೀಪ ಬೆಳಗಿಸಿ, ಪಟೇಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ, ಸರ್ದಾರ್ ವಲ್ಲಬಾಯ್ ಪಟೇಲರು ಏಕತೆಯ ಮತ್ತು ಐಕ್ಯತೆಯ ಸಂಕೇತವಾಗಿದ್ದಾರೆ ಭಾರತವನ್ನು ಒಂದುಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಅದೇ ರೀತಿ ಕಲ್ಯಾಣ ಕರ್ನಾಟಕದ ವಿಲೀನತೆಯಲ್ಲಿಯೂ ಸಹ ಪರಿಣಾಮಕಾರಿಯಾದ ಪಾತ್ರವಹಿಸಿದ್ದಾರೆ ಎಂದು ಹೇಳಿದರು.