ನವಲಗುಂದ: ನವಲಗುಂದ ನಗರದ ಶಾಸಕರ ಜನಸಂಪರ್ಕ ಕಾರ್ಯಾಲಯದಲ್ಲಿ ದೀಪಾವಳಿ ನಿಮಿತ್ತ ವಿಶೇಷ ಪೂಜೆ
ಪವಿತ್ರ ದೀಪಾವಳಿ ಹಬ್ಬದ ಪ್ರಯುಕ್ತ ಇಂದು ನವಲಗುಂದ ವಿಧಾನಸಭಾ ಮತಕ್ಷೇತ್ರ-69 ನವಲಗುಂದ ನಗರದ ಶಾಸಕರ ಜನಸಂಪರ್ಕ ಕಾರ್ಯಾಲಯದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳು,  ಕ್ಷೇತ್ರದ ಮುಖಂಡರು, ಪತ್ರಿಕಾ ಮಾಧ್ಯಮದವರು, ಸಿಬ್ಬಂದಿ ವರ್ಗ ಮತ್ತು ಸಹ ಕುಟುಂಬದೊಂದಿಗೆ ಶಾಸಕರಾದ ಎನ್. ಎಚ್.ಕೋನರಡ್ಡಿ ಅವರು ದೇವರಿಗೆ ಪೂಜೆ ನೆರವರಿಸಿ, ನಾಡಿನೆಲ್ಲೆಡೆ ಉತ್ತಮ ಬೆಳೆಗಳಾಗಿ, ರೈತರ ಬಾಳು ಸಮೃದ್ಧಿಯಿಂದ ಕೂಡಿರಲೆಂದು ಪ್ರಾರ್ಥಿಸಿ ಆ ದೇವರ ಆಶೀರ್ವಾದ ಪಡೆದುಕೊಂಡರು.