ಗುಂಡ್ಲುಪೇಟೆ: ಬಂಡೀಪುರ ಅರಣ್ಯದ ಗಡಿಯಲ್ಲಿ ಆನೆ ಚಿತ್ರ ನೋಡಿ ಗಲಿಬಿಲಿಗೊಂಡ ಕಾಡಾನೆ : ವಿಡಿಯೋ ವೈರಲ್
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಾಷ್ಟ್ರೀಯ ಉದ್ಯಾನವನವಾದ ಬಂಡೀಪುರದ ಗಡಿಯ ರಸ್ತೆಯ ಬದಿಯಲ್ಲಿ ಗೋಡೆಯ ಮೇಲೆ ಬರೆದಿದ್ದ ಆನೆ ಚಿತ್ರ ನೋಡಿದ ಕಾಡಾನೆಯೊಂದು ಕೆಲಕಾಲ ಗಲಿಬಿಲಿಗೊಂಡಿದೆ ಪ್ರಸಂಗ ನಡೆದಿದೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕ ತಮಿಳುನಾಡು ಚೆಕ್ ಪೋಸ್ಟ್ ಬಳಿ ರಸ್ತೆ ದಾಟಿ ಗೋಡೆಯ ಬಳಿ ಬಂದ ಕಾಡಾನೆ ಗೋಡೆ ಮೇಲೆ ಬರೆದಿದ್ದ ಆನೆ ಚಿತ್ರ ನೋಡಿ ಅದು ನಿಜವಾದ ಆನೆ ಎಂದು ಭಾವಿಸಿ ಭಯಗೊಂಡಿತು. ಬಳಿಕ ಸಾವರಿಸಿಕೊಂಡು ಹಿಂದೆ ಸರಿಯಿತು.