ದಾಂಡೇಲಿ : ಮಧ್ಯಪ್ರದೇಶದಲ್ಲಿ ನಡೆದ 69ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ದಾಂಡೇಲಿಯ ಜನತಾ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿನಿ ದೃಷ್ಟಿ ನಕುಲ್ ಕಾಮತ್ ಭಾಗವಹಿಸಿ ಜಿಲ್ಲೆಗೆ ತಾಲೂಕಿಗೆ ಮತ್ತು ಶಾಲೆಗೆ ಕೀರ್ತಿಯನ್ನು ತಂದಿದ್ದಾಳೆ. ಈ ಬಗ್ಗೆ ಭಾನುವಾರ ಸಂಜೆ 5:00 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಮಧ್ಯಪ್ರದೇಶದಲ್ಲಿ ನಡೆದ 69ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ 14 ವರ್ಷ ವಯೋಮಿತಿಯೊಳಗಿನ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದೃಷ್ಟಿ ನಕುಲ್ ಕಾಮತ್ ಇವಳು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾಳೆ. ಇವಳು ನಗರದ ಉದ್ಯಮಿ ನಕುಲ್ ಕಾಮತ್ ಮತ್ತು ಶಿಕ್ಷಕಿ ಕವಿತಾ ಕಾಮತ್ ದಂಪತಿಗಳ ಸುಪುತ್ರಿಯಾಗಿದ್ದಾಳೆ.