ಹೊಸಪೇಟೆ: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್& ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ನಗರಸಭೆ ಪೌರಾಯುಕ್ತರಿಂದ ಮಾಹಿತಿ
2025-26ನೇ ಸಾಲಿನ ನಗರಸಭೆ ನಿಧಿಯ ಯೋಜನೆ ಅಡಿಯಲ್ಲಿ ವ್ಯಕ್ತಿ ಸಂಬಂಧಿತ ಅನುಕೂಲಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ವೈಯಕ್ತಿಕ ಫಲಾನುಭವಿಗಳಾಗ ಬಯಸುವವರು ಯೋಜನೆಯಡಿ ಅರ್ಜಿಯನ್ನು ಸೆಪ್ಟಂಬರ್ 30 ರೊಳಗಾಗಿ ಹೊಸಪೇಟೆ ನಗರಸಭೆ ಕಾರ್ಯಾಲಯಕ್ಕೆ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ www.hospetcity.gov.in ವೆಬ್ಸೈಟ್ ಅನ್ನು ಸಂಪರ್ಕಿಸಿ ಮಾಹಿತಿಯ ವಿವರವನ್ನು ಪಡೆದುಕೊಳ್ಳಬಹುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.