ಕೋರ್ಟ್ ಗೆ ಹಾಜರಾಗಿದ್ದ ರೌಡಿಶೀಟರ್ ನನ್ನು ಬಂಧಿಸಿದ ಮಂಗಳೂರು ಕೊಣಾಜೆ ಪೊಲೀಸರು
ಕೊಲೆ, ಸುಲಿಗೆ, ದಾಳಿ, ಎನ್.ಡಿ.ಪಿಎಸ್ ಸೇರಿದಂತೆ ಒಟ್ಟು 8 ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹಾಗೂ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ ಬಂಟ್ವಾಳ ತಾಲೂಕು ನರಿಗಾನ ಗ್ರಾಮದ ಪೊಟ್ಟೊಳಿಕೆ ನಿವಾಸಿ, ರೌಡಿ ಶೀಟರ್ ನಜೀಮ್ @ ನಜ್ಜು (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.