ಚನ್ನಪಟ್ಟಣ: ರೈತರನ್ನು ಕೆಣಕಿದರೆ ನಿಮ್ಮ ಸರ್ಕಾರ ಉಳಿಯಲ್ಲ. ನಗರದ ತಾಲ್ಲೂಕು ಕಛೇರಿಯ ಮುಂದೆ ರೈತರ ಪ್ರತಿಭಟನೆ.
ಚನ್ನಪಟ್ಟಣ -- ರಾಜಕಾರಣಿಗಳೆ ನಿಮ್ಮ ಅಧಿಕಾರ ಶಾಶ್ವತವಿಲ್ಲ, ರೈತರನ್ನು ಕೆಣಕಿದರೆ ಸರ್ಕಾರ ಉಳಿಯುವುದಿಲ್ಲ ಎಂದು ರೈತ ಮುಖಂಡರು ನಗರದ ತಾಲ್ಲೂಕು ಕಛೇರಿ ಅವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ಥಾನದ ಉಳಿವಿಗಾಗಿ ಈಗ ಜಾತಿ ಗಣತಿ ಮಾಡಿ ಜಾತಿ ಜಾತಿ ನಡುವೆ ವ್ಯೆಷ