ರಾಯಚೂರು ನಗರದ ಓಂ ಸಾಯಿ ಧ್ಯಾನ ಮಂದಿರದಲ್ಲಿ ರಾಯಚೂರು ಪೂರ್ಣಿಮಾ ಆಯುರ್ವೇದಿಕ್ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಆಸ್ಪತ್ರೆ ವತಿಯಿಂದ ಇಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಜರಗಿತು. ಓಂ ಸಾಯಿ ಜ್ಞಾನ ಮಂದಿರದ ಧರ್ಮಾಧಿಕಾರಿ ಸಾಯಿಕಿರಣ್ ಆದೊನಿ ಯವರು ಸಸಿಗೆ ನೀರಾಕುವುದರ ಮೂಲಕ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿದರು. ನಂತರ ಅವರು ಮಾತನಾಡುತ್ತಾ ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಈ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಪೂರ್ಣಿಮಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನವರು ಇಲ್ಲಿ ಆಯೋಜನೆ ಮಾಡಿದ್ದಾರೆ.ಇದರ ಸದುಪಯೋಗ ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಹೇಳಿದರು.