ಬೀದರ್: ನಗರದ ಸ್ಕೈಲೈನ್ ಶಾಲೆಯಲ್ಲಿ ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ
Bidar, Bidar | Nov 9, 2025 ಬೀದರ್ನ ಸ್ಕೈಲೆನ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಜರುಗಿತು. ಬಸವಕಲ್ಯಾಣ ತಹಶೀಲ್ದಾರ್ ದತ್ತಾತ್ರೆಯ ಗಾದಾ ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳು ವಿವಿಧ ಮಾದರಿ ಸಿದ್ಧಪಡಿಸಿ ಮಾದರಿಯ ವಿವರಣೆ ನೀಡಿ ಗಮನ ಸೆಳೆದರು. ಮೆದುಳು, ಅಸ್ತಿಪಂಜರ, ಪವನ ಶಕ್ತಿ, ಮಾನವನ ಹೃದಯ, ಮಾನವನ ಜೀರ್ಣಾಂಗ ವ್ಯೂಹ, ಪಟ್ಟಣ ಮತ್ತು ಹಳ್ಳಿ, ವಾಯು ಮಾಲಿನ್ಯ, ಜಲಸಂರಕ್ಷಣೆ ಸೇರಿದಂತೆ ಮುಂತಾದ ಮಾದರಿಗಳು ನೋಡುಗರ ಗಮನ ಸೆಳೆದವು.