ಮಳವಳ್ಳಿ: ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಆಚರಣೆ, ಅಧ್ಯಕ್ಷರು ಸದಸ್ಯರಿಂದ ಗೌರವ ಸಮರ್ಪಣೆ
ಮಳವಳ್ಳಿ : ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಆಚರಿಸಲಾಯಿತು. ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಅಧಿಕಾರಿಗಳು ಶ್ರೀ ವಾಲ್ಮೀಕಿ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಾ ರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಪುರಸಭಾ ಧ್ಯಕ್ಷ ಪುಟ್ಟಸ್ವಾಮಿ ಅವರು ದರೋಡೆ ಕೋರನಾಗಿ ಹಲವಾರು ಪಾಪಕೃತ್ಯಗಳಲ್ಲಿ ಬಾಗಿಯಾಗಿದ್ದ ದಕ್ಷ ಎಂಬ ಹೆಸರಿನ ಇವರು ನಂತರದಲ್ಲಿ ಬದಲಾಗಿ ಮಹಾನ್ ತಪ್ಪಸ್ವಿಯಾಗಿ ರಾಮಾಯಣ ಎಂಬ ಮಹಾ ಕಾವ್ಯವನ್ನು ರಚಿಸಿ ಜಗತ್ತಿಗೆ ಧರ್ಮದ ಬೆಳಕು ತೋರಿದ್ದರ ಜೊತೆಗೆ ಆದಿಕವಿ ಎಂದು ವಿಶ್ವ ವಿಖ್ಯಾತರಾದರು ಎಂದು ಸ್ಮರಿಸಿದರು.