ಮಂಗಳೂರು: ಬಿಜೆಪಿಯವರಿಂದ ಸುಖಾಸುಮ್ಮನೆ ಗೊಂದಲ; ಕೊಡಿಯಾಲ್ ಬೈಲಲ್ಲಿ ಸಚಿವ ಗುಂಡೂರಾವ್ ಹೇಳಿಕೆ
ರಾಜ್ಯದಲ್ಲಿ ನಡಿತಾ ಇರೋದು ಜಾತಿಗಣತಿ ಅಲ್ಲ. ಇದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ. ಈ ವಿಚಾರದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸೆ.21ರ ರವಿವಾರ ಮಂಗಳೂರಿನಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಗೌಡ ಕ್ರಿಶ್ಚಿಯನ್ ಮೊದಲಾದವುಗಳು ಹಿಂದಿನ ಆಯೋಗಗಳು ಸಮೀಕ್ಷೆ ಮಾಡಿದಾಗ ಜನರೇ ಹೇಳಿರುವುದು. ಆಯೋಗ ಅಥವಾ ಸರಕಾರ ಸೃಷ್ಟಿ ಮಾಡಿರುವುದಲ್ಲ ಎಂದು ತಿಳಿಸಿದರು.