ಮಳವಳ್ಳಿ: ಪಟ್ಟಣದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷರ ಸುದ್ದಿಗೋಷ್ಠಿ, ತಾಲ್ಲೂಕಿನಲ್ಲಿ ಸಂಘವನ್ನು ಸದೃಢ ಗೊಳಿಸುವುದು ನನ್ನ ಗುರಿ ಎಂದ ಕರಿಯಪ್ಪ
ಮಳವಳ್ಳಿ : ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘವನ್ನು ಸಂಘಟಿಸಿ ಸದೃಢಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಂ. ಕರಿಯಪ್ಪ ತಿಳಿಸಿದ್ದಾರೆ. ಮಳವಳ್ಳಿ ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ಕಚೇರಿಗಳಲ್ಲಿ ರೈತರ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ, ರೈತರು ಅರ್ಜಿ ಕೊಟ್ಟರೇ ಒಂದು ವಾರದಲ್ಲಿ ಆಗುವ ಕೆಲಸ ವರ್ಷವಾದರೂ ಸಮಸ್ಯೆ ಬಗೆಹರಿಸುವುದಿಲ್ಲ ಕಾಡು ಪ್ರಾಣಿಗಳು ಹಾಗೂ ರೈತರ ನಡವೆ ಸಂಘರ್ಷ ನಿರಂತರವಾಗಿ ನಡೆಯುತ್ತಿದೆ. ನಷ್ಟಕ್ಕೊಳಗಾದ ರೈತರಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ ಎಂದು ವಿಷಾಧಿಸಿದರು.