ಶ್ರೀರಂಗಪಟ್ಟಣ: ಪಟ್ಟಣದ ಕೆ.ಆರ್.ಎಸ್ ಗೆ ಬಿಗಿ ಪೊಲೀಸ್ ಭದ್ರತೆ
ಶ್ರೀರಂಗಪಟ್ಟಣದ ಕೆ. ಆರ್. ಎಸ್ ಗೆ ಬಿಗಿ ಪೊಲೀಸ್ ಭದ್ರತೆ ದೆಹಲಿಯಲ್ಲಿ ನಡೆದಿದ್ದ ಕಾರ್ ಬಾಂಬ್ ಬ್ಲಾಸ್ಟಸ್ಟ್ ಪ್ರಕರಣದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ KRS ಡ್ಯಾಂನಲ್ಲಿ ಹೆಚ್ಚಿನ ಕಣ್ಣಾವಲು ಹಾಕಲಾಗಿದೆ. KRS ಸೇರಿದಂತೆ ಜಿಲ್ಲೆಯ ಧಾರ್ಮಿಕ ಸ್ಥಳಗಳಲ್ಲೂ ಪೊಲೀಸರು ಅಲರ್ಟ್ ಆಗಿದ್ದು, ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಕಣ್ಣಾವಲು ಹೆಚ್ಚಿಸಲಾಗಿದೆ. ಚೆಕ್ ಪೋಸ್ಟ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ಒಟ್ಟಾರೆಯಾಗಿ, ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಭದ್ರತೆಯನ್ನು ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲ ದಂಡಿ ಅವರು ಮಂಗಳವಾರ ಸಂಜೆ ಐದು ಗಂ