ಬೆಳ್ತಂಗಡಿ: ಧರ್ಮಸ್ಥಳ ಕೇಸ್: ಚಿನ್ನಯ್ಯನ ಮತ್ತೊಂದು ವೀಡಿಯೋ ವೈರಲ್
1994 ರಲ್ಲಿ ನಾನು ಧರ್ಮಸ್ಥಳಕ್ಕೆ ಕೆಲಸಕ್ಕೆಂದು ಬಂದೆ. ನೇತ್ರಾವತಿ ಸ್ನಾನಘಟ್ಟದ ಹತ್ತಿರ ರೂಮ್ ಕೊಟ್ಟಿದ್ದರು. ನನ್ನ ಕೆಲಸ ಹೆಣಗಳನ್ನು ಹೂತು ಹಾಕುವುದಾಗಿತ್ತು. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಹೆಣಗಳನ್ನು ಹೂತು ಹಾಕುತ್ತಿದ್ದೆ. ನಾನು ಪ್ರಾಣಭಯದಿಂದ ಊರು ಬಿಟ್ಟು ಹೋಗಿದ್ದೆ ಎಂದು ದೂರುದಾರ ಚಿನ್ನಯ್ಯ ವೀಡಿಯೋವೊಂದರಲ್ಲಿ ತಿಳಿಸಿದ್ದಾರೆ. ಒಂದು ವೇಳೆ ಹೆಣಗಳನ್ನು ಹೂತು ಹಾಕದಿದ್ರೆ ಮನೆಗೆ ಬೀಗ ಹಾಕ್ತೀನಿ ಅಂತಾ ಬೆದರಿಕೆ ಹಾಕ್ತಾ ಇದ್ದರು ಎಂದು ಹೇಳಿರುವ ಅವರು ಸೌಜನ್ಯ ಕೊಲೆಯಾದ ನಂತರ ನಾನು 2015 ರ ಸುಮಾರಿಗೆ ಧರ್ಮಸ್ಥಳ ತೊರೆದಿದ್ದೆ ಎಂದವರು ಹೇಳಿದ್ದಾರೆ.