ಅಕ್ಕ ಮಾಯದೇವಿ ಅವರ ಆಶಯದಂತೆ ಬಹುಜನರ ಕನಸನ್ನು ನನಸಾಗಿಸಲು ಅವರ ಧ್ಯೇಯ ವಾಕ್ಯದೊಂದಿಗೆ ಶ್ರಮಿಸುತ್ತಿರುವ ಬಿ ಎಸ್ ಪಿ ಜೊತೆಗೆ ಸರ್ವರು ಕೈಜೋಡಿಸಬೇಕು ಎಂದು ಬಿ ಎಸ್ ಪಿ ಹುಮ್ನಾಬಾದ್ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಭರತ್ ಭಾಗ್ಯಕರ್ ಮನವಿ ಮಾಡಿದರು. ಬಿ ಎಸ್ ಪಿ ಆರ್ಥಿಕ ಸಯೋಗ ದಿವಸ್ ಅಂಗವಾಗಿ ಗುರುವಾರ ಮಧ್ಯಾಹ್ನ 3:45 ಕ್ಕೆ ದೇಣಿಗೆ ಸಂಗ್ರಹಿಸಲಾಯಿತು. ಜಿಲ್ಲಾ ಅಧ್ಯಕ್ಷ ಕಪಿಲ್ ಗೋಡ್ಬೋಲೆ, ಜ್ಞಾನೇಶ್ವರ, ಅಶೋಕ, ನೀಲೇಷ ಇದ್ದರು.