ದಾಂಡೇಲಿ : ತಾಲೂಕಿನ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಾಲಮಡ್ಡಿ ಪ್ರದೇಶದ ನಿವಾಸಿಯಾಗಿರುವ 54 ವರ್ಷ ವಯಸ್ಸಿನ ಶಂಕರ ಲಕ್ಷ್ಮಣ ನಾಯ್ಕ ಎಂಬವರು ಡಿ.26 ರಿಂದ ನಾಪತ್ತೆಯಾಗಿದ್ದಾರೆ ಎಂದು ಭಾನುವಾರ ರಾತ್ರಿ 9:30 ಗಂಟೆಗೆ ಅವರ ಪುತ್ರ ನಾಗರಾಜ ಶಂಕರ ನಾಯ್ಕ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರು ಎಲ್ಲಿಯಾದರು ಕಂಡು ಬಂದಲ್ಲಿ, ಇವರ ಬಗ್ಗೆ ಎಲ್ಲಿಯಾದರೂ ಸುಳಿವು ಸಿಕ್ಕಲ್ಲಿ ದಾಂಡೇಲಿ ಗ್ರಾಮೀಣ ಠಾಣೆಗೆ ಮಾಹಿತಿ ನೀಡುವಂತೆ ನಾಗರಾಜ ಶಂಕರ ನಾಯ್ಕ ವಿನಂತಿಸಿದ್ದಾರೆ.