ಶಿರಸಿ: ಪತ್ರಕರ್ತರಿಗೆ ಸುಲಲಿತವಾಗಿ ಆರೋಗ್ಯ ವಿಮೆ ಹಾಗೂ ಬಸ್ ಪಾಸ್ ಸಿಗಲು ಮೊದಲ ಆದ್ಯತೆ, ನಗರದಲ್ಲಿ ಕಾ.ಪ.ಸಂ.ರಾಜ್ಯ ಕಾರ್ಯಕಾರಿಣಿ ಸದಸ್ಯ ವಿಠ್ಠಲದಾಸ
ಶಿರಸಿ : ಪತ್ರಕರ್ತರಿಗೆ ಸುಲಲಿತವಾಗಿ ಆರೋಗ್ಯ ವಿಮೆ ಹಾಗೂ ಬಸ್ ಪಾಸ್ ಸಿಗಲು ಮೊದಲ ಆದ್ಯತೆಯಡಿ ಕಾರ್ಯ ನಿರ್ವಹಿಸುವುದಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ವಿಠ್ಠಲದಾಸ ಕಾಮತ್ ಅವರು ಹೇಳಿದರು. ಅವರು ಭಾನುವಾರ ಸಂಜೆ 4:00 ಸುಮಾರಿಗೆ ಶಿರಸಿಯಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದರು. ಅದಕ್ಕೂ ಮುನ್ನ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಅವರನ್ನು ದಾಂಡೇಲಿಯ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಗೌರವಿಸಲಾಯಿತು.