ಕಮಲಾಪುರ: ಅನಾಥ ಅಜ್ಜಿಗೆ ಮಗನಾಗಿ ಧೈರ್ಯ ತುಂಬಿದ ಕಾನ್ಸಟೇಬಲ್: ಮರಗುತ್ತಿಯಲ್ಲಿ ಪೊಲೀಸರ ಮಾನವೀಯ ಸೇವೆಗೆ ಜನರ ಮೆಚ್ಚುಗೆ
ಕಮಲಾಪುರ ಪೊಲೀಸ್ ಠಾಣೆಯ ವತಿಯಿಂದ ಮನೆ ಮನೆಗೆ ಪೊಲೀಸ್ ಅಭಿಯಾನವನ್ನು ಯಶಸ್ವಿಯಾಗಿ ಮುಂದುವರಿಸಲಾಗುತ್ತಿದೆ. ಈ ಮೂಲಕ ಜನರಲ್ಲಿ ಕಾನೂನು ಅರಿವು ಮೂಡಿಸುವ ಜೊತೆಗೆ ತುರ್ತು ಸಂದರ್ಭಗಳಲ್ಲಿ 112 ಸಂಖ್ಯೆಗೆ ಕರೆ ಮಾಡುವ ಕುರಿತು ಜಾಗೃತಿ ಕಾರ್ಯ ನಡೆಯುತ್ತಿದೆ. ಠಾಣೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಮಲಾಪೂರ ಠಾಣಾ ವ್ಯಾಪ್ತಿಯ ಮರಗುತ್ತಿ ಗ್ರಾಮದಲ್ಲಿ ಅಭಿಯಾನ ನಡೆಸುತ್ತಿದ್ದ ಕಾನ್ಸ್ಟೇಬಲ್ ಸುನೀಲ್ ಚೌವ್ಹಾನ ಅವರು ಅನಾಥ ಅಜ್ಜಿಗೆ ಮಗನಾಗಿ ನಿಂತು ಮಾನವೀಯತೆ ಮೆರೆದಿದ್ದಾರೆ. ಮನೆ ಮನೆಗೆ ಭೇಟಿ ನೀಡುತ್ತಿದ್ದಾಗ, ಗೌರಮ್ಮ ಹಲಚಲಿ ಎಂಬ ಅಜ್ಜಿಯ ಮನೆಗೆ ಭೇಟಿ ನೀಡಿದ ಸುನೀಲ್ ಅವರು, ಅಜ್ಜಿಗೆ ಯಾರು ಸಂಬಂಧಿಕರಿಲ್ಲದೆ ಒಂಟಿಯಾಗಿ ಬದುಕು ಸಾಗಿಸುತ್ತಿರುವುದನ್ನು ಕಂಡು, ನಿಮ್ಮೊಂದಿಗೆ ನಾವಿದ್ದೇವೆ, ಹ