ಕಳೆದ ನಾಲ್ಕೈದು ದಿನಗಳಿಂದ ಮೋಡ ಕವಿದ ವಾತವರಣ, ಮಳೆಯಿಂದಾಗಿ ಕೊಯ್ಲಿಗೆ ಬಂದ ಭತ್ತ ನೆಲಕಚ್ಚಿದ್ದು ರೈತರಲ್ಲಿ ಆತಂಕ ಶುರುವಾಗಿದೆ. ಮಂಗಳವಾರ 4 ಗಂಟೆಗೆ ತಾಲ್ಲೂಕಿನ ಹಲವಾರು ಕಡೆಗಳಲ್ಲಿ ತೆನೆ ಕಟ್ಟಿ ನಿಂತ ಭತ್ತದ ಬೆಳೆ ನೆಲಕ್ಕುರುಳಿ ಬಿದ್ದಿದೆ. ಒಂದು ತಿಂಗಳಿನಿಂದ ವೈರಸ್ ರೋಗ ಬಂದು ಕಾಳು ಕಟ್ಟುವ ಹಂತದಲ್ಲಿದ್ದ ಭತ್ತ ಇದೀಗ ಮಳೆ-ಗಾಳಿಯಿಂದ ನೆಲಕ್ಕುರುಳಿ ಬಿದ್ದು ಅಪಾರ ನಷ್ಟವಾಗಿದೆ.