ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿ ಆಚರಿಸುವ ಮೊಹರಂ ಹಬ್ಬವನ್ನು ಧಾರವಾಡ ಶಹರ ಹಾಗೂ ಧಾರವಾಡ ಗ್ರಾಮೀಣ ಭಾಗದಲ್ಲಿ ಸಡಗರ ಸಂಭ್ರಮದಿAದ ಆಚರಿಸಲಾಯಿತು. ಧಾರವಾಡ ನಗರದ ಮಾಳಾಪುರ, ಸೈದಾಪುರ, ಮೆಹಬೂಬ ನಗರ, ಮದಿಹಾಳ, ಹೆಬ್ಬಳ್ಳಿ ಅಗಸಿ, ಮನಕಿಲ್ಲಾ, ಹೊಸಯಲ್ಲಾಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಪಂಚಾಗಳ ಮೆರವಣಿಗೆ ನಡೆಯಿತು. ಅದರಂತೆ ಗ್ರಾಮೀಣ ಭಾಗವಾದ ತಾಲೂಕಿನ ಉಪ್ಪಿನ ಬೇಟಗೇರಿ, ಕವಲಗೇರಿ, ಹೆಬ್ಬಳ್ಳಿ, ಅಮ್ಮಿನಭಾವಿ, ಯಾದವಾಡ. ಗರಗ ಸೇರಿದಂತೆ ಪಂಜಾ ಹಾಗೂ ಡೋಲಿಗಳನ್ನು ಮೇರವಣಿಗೆಯು ಎಲ್ಲರ ಗಮನ ಸೇಳೆಯಿತು.