ಭಾಲ್ಕಿ: ಪಟ್ಟಣದಲ್ಲಿ ಹಾಡು ಹಗಲೆ ಮನೆ ಬೀಗ ಮುರಿದು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
Bhalki, Bidar | Sep 17, 2025 --- 📺 ಭಾಲ್ಕಿಯಲ್ಲಿ ಮಧ್ಯಾಹ್ನದ ಹೊತ್ತಿಗೆ ದರೋಡೆ – ಮನೆಗೆ ಕನ್ನ ಹಾಕಿದ ಕಳ್ಳರು ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ದಿವಸಕಳೆದೇ ಕಳ್ಳತನ ನಡೆದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಾಹಿತಿ ಪ್ರಕಾರ, ಬಾಲಾಜಿ ನಗರ, ಕನಸೇ ಆಸ್ಪತ್ರೆ ಪಕ್ಕದಲ್ಲಿರುವ ಮನೆಯಲ್ಲಿ, ಇಂದು ಮಧ್ಯಾಹ್ನ ಸುಮಾರು 1 ಗಂಟೆಯಿಂದ 2 ಗಂಟೆಯ ನಡುವೆ ಕಳ್ಳತನ ನಡೆದಿದೆ. ಮನೆಯವರು ಹೊರಗಿದ್ದ ಸಮಯವನ್ನು ಟಾರ್ಗೆಟ್ ಮಾಡಿಕೊಂಡು, ಕಳ್ಳರು ಬೀಗ ಒಡೆದು ಒಳನುಗ್ಗಿದ್ದಾರೆ.