ಸಿಂಧನೂರು: ಸಿಂಧನೂರು : ಕನ್ನಡ ರಾಜ್ಯೋತ್ಸವದ ನಾಮಫಲಕ ಶೇ.60 ಕನ್ನಡದಲ್ಲಿ ಕಡ್ಡಾಯ
ತಹಶೀಲ್ದಾರ್ ಅರುಣ್ ಕುಮಾರ್ ದೇಸಾಯಿಯವರ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪೂರ್ವಭಾವಿ ಸಭೆಯನ್ನು ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆಸಲಾಯಿತು. ಪ್ರಮುಖವಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಅದರ ಭಾಗವಾಗಿ ನವೆಂಬರ್ 1 ರೊಳಗಾಗಿ ಪ್ರತಿಯೊಂದು ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಸರ್ಕಾರದ ನಿಯಮದಂತೆ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡದಲ್ಲಿ ನಮಾಫಲಕಗಳು ಇರಬೇಕು ಎಂದರು.