ಗುಳೇದಗುಡ್ಡ: ಕಟ್ಟಡ ನಿರ್ಮಾಣವಾಗಿ ವರ್ಷ ಗತಿಸಿದರೂ ಉದ್ಘಾಟನೆ ಭಾಗ್ಯ ಕಾಣದ ಪಟ್ಟಣದ ಹೊಸ ಪ್ರವಾಸಿ ಮಂದಿರ
ಗುಳೇದಗುಡ್ಡ ಪಟ್ಟಣದ ಪ್ರವಾಸಿ ಮಂದಿರ ಕಟ್ಟಡ ನಿರ್ಮಾಣವಾಗಿ ವರ್ಷಗತಿಸುತ್ತಾ ಬಂದರೂ ಅದರ ಉದ್ಘಾಟನೆ ಭಾಗ್ಯ್ ಇನ್ನೂ ಕಂಡುಬಂದಿಲ್ಲ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಇಲ್ಲಿ ಎರಡು ಅಂತಸ್ತಿನ ಪ್ರವಾಸಿ ಮಂದಿರ ನಿರ್ಮಾಣಗೊಂಡಿದೆ ಅಚ್ಚುಕಟ್ಟಾದ ಪ್ರವಾಸಿ ಮಂದಿರ ನಿರ್ಮಾಣವಾಗಿ ವರ್ಷಗತಿಸಿದೆ ಆದರೆ ಅದರ ಉದ್ಘಾಟನೆ ಮಾತ್ರ ಇನ್ನೂ ಆಗಿಲ್ಲ