ಹೊಸದುರ್ಗ ಪಟ್ಟಣದಲ್ಲಿ ಬೈಕಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಹೊಸದುರ್ಗ ಪಟ್ಟಣದಲ್ಲಿ ನಡೆದಿದೆ. ಹೊಸದುರ್ಗ ಪಟ್ಟಣದ ಎಸ್.ಜೆ.ಎಮ್. ಕಾಂಪ್ಲೆಕ್ಸ್ ಮುಂಭಾಗ ಬುಧವಾರ ಮಧ್ಯಾಹ್ನ 1 ಗಂಟೆಗೆ ನೆಡೆದಿದೆ. ಮೃತ ರಂಗಸ್ವಾಮಿ (38) ಹೊಸದುರ್ಗ ಪಟ್ಟಣದ ವಿನಾಯಕ ಬಡಾವಣೆಯ ನಿವಾಸಿಯಾಗಿದ್ದು, ಪುರಸಭೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಮತ್ತೋರ್ವ ಮೃತ ವ್ಯಕ್ತಿಯನ್ನು ತಾಲ್ಲೂಕಿನ ಸಾಣೆಹಳ್ಳಿ ಗ್ರಾಮದ ಅಜೆಯ (21) ಎಂದು ಗುರುತಿಸಲಾಗಿದೆ. ಈತ ದಿನಗೂಲಿ ನೌಕರನಾಗಿ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದ.